ಕೊಡ್ಮನ್ ಅಮರನಾಥ ಶೆಟ್ಟಿ ಇವರು ಕರ್ನಾಟಕ ಸರ್ಕಾರದ ಮಾಜಿ ಸಚಿವರ ಭಾರತೀಯ ರಾಜಕಾರಣಿ ಹಾಗೂ ಜಾತ್ಯತೀತ ಜನತಾ ದಳ ಮುಖಂಡ . == ಜನನ ಮತ್ತು ವೃತ್ತಿಜೀವನ == ಅಮರನಾಥ್ ಇವರು ಬೆಳೆದದ್ದು ಮೂಡಬಿದಿರೆಯಲ್ಲಿ . ೧೯೬೫ ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ಅವರು, ಕಾರ್ಕಳ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು. ಇವರು ಮೂಡುಬಿದಿರೆ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಾರ್ಕಳ ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷ, ಸಹಕಾರಿ ಸೇವಾ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು . ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ ೧೯೮೩ , ೧೯೮೭ ಮತ್ತು ೧೯೯೪ ಹೀಗೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ , ಪ್ರವಾಸೋದ್ಯಮ ಮತ್ತು ಮುಜರಾಯಿ ಸಚಿವರಾಗಿದ್ದರು. == ನಿಧನ == ಅಮರನಾಥ ಶೆಟ್ಟಿ ಇವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ೨೭ ಜನವರಿ ೨೦೨೦ ರಂದು ನಿಧನ ಹೊಂದಿದರು . == ಉಲ್ಲೇಖಗಳು ==